1979 ರಲ್ಲಿ ಸಿರಸಿ ತಾಲೂಕಿನ ಸಾಲ್ಕಣಿಯಲ್ಲಿ ಜನನ.ಅಜ್ಜ ಭಾಗವತರು,ದೊಡ್ಡಪ್ಪ ಮದ್ದಲೆವಾದಕರು,ಅಪ್ಪ ಕೇಶವ ಹೆಗಡೆ ಯಕ್ಷಗಾನದ ವೇಷಧಾರಿ .ಹಾಗಾಗಿ ಎಳವೆಯಲ್ಲಿಯೇ ಯಕ್ಷಗಾನದ ಕುರಿತಾದ ಅತ್ಯಾಸಕ್ತಿ. ಕಾಲೇಜು ದಿನಗಳಲ್ಲಿ ನಾಟಕಗಳಲ್ಲಿ ಅಭಿನಯ.ಆಮೇಲೆ ಹಿರಿತೆರೆ, ಕಿರುತೆರೆಗಳನ್ನೂ ಕಾಣಿಸಿಕೊಂಡವರು.
ತಾಳಮದ್ದಲೆಯಲ್ಲಿ ಅರ್ಥ ಹೇಳುವುದು ಮೆಚ್ಚಿನ ಹವ್ಯಾಸ. ಸಾಮಾಜಿಕ ಕ್ಷೇತ್ರದಲ್ಲೂ ಆಸಕ್ತಿ ಹೊಂದಿರುವ ಇವರು ಪ್ರಸ್ತುತ ಕದಂಬ ಕೋಅಪರೇಟಿವ್ ಸಿರ್ಸಿಯ ನಿರ್ದೇಶಕರು ಹಾಗೂ 60 ವರ್ಷಗಳ ಇತಿಹಾಸ ಹೊಂದಿರುವ ಪ್ರತಿಷ್ಠಿತ MES ಶಿಕ್ಷಣ ಸಂಸ್ಥೆಯ ಪ್ರಪ್ರಥಮ ಮಹಿಳಾ ನಿರ್ದೇಶಕಿ. ಯಕ್ಷಗೆಜ್ಜೆ ಸಂಸ್ಥೆಯ ಸದಸ್ಯೆ.
ಯಕ್ಷಗೆಜ್ಜೆ (ರಿ) ಇದು ಶಿರಸಿಯ ಹೃದಯಭಾಗದಲ್ಲಿ ಸ್ಥಾಪಿತವಾದ, ಮಹಿಳೆಯರು ಮತ್ತು ಮಕ್ಕಳಿಗೆ ಸಮರ್ಪಿತವಾದ ಯಕ್ಷಗಾನ ತರಬೇತಿ ಕೇಂದ್ರವಾಗಿದೆ. 2017ರಲ್ಲಿ ಶ್ರೀಮತಿ ನಿರ್ಮಲಾ ಮಂಜುನಾಥ ಹೆಗಡೆ ಗೋಳಿಕೊಪ್ಪ ಅವರ ನೇತೃತ್ವದಲ್ಲಿ ಆರಂಭಗೊಂಡ ಈ ಸಂಸ್ಥೆ, ಯಕ್ಷಗಾನದ ಪಾವನ ಪರಂಪರೆಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ.
© YAKSHA GEJJE. 2017-2025. All Rights Reserved