About Us

ಯಕ್ಷಗೆಜ್ಜೆ (ರಿ) – ಮಹಿಳಾ ಮತ್ತು ಮಕ್ಕಳ ಯಕ್ಷಗಾನ ತರಬೇತಿ ಕೇಂದ್ರ

ಒಂದು ದಿನ ಶಿರಸಿಯ ಸಾಮ್ರಾಟ್ ಹೋಟೆಲ್ ಬಾಗಿಲಲ್ಲಿ ಒಬ್ಬ ವ್ಯಕ್ತಿ ನಿರ್ಮಲಕ್ಕ ಅವರನ್ನು ಕೇಳಿದರು
“ಯಕ್ಷಗಾನ ಕ್ಲಾಸ್ ಶಿರಸಿಯಲ್ಲಿ ಶುರು ಮಾಡ್ತಿಲ್ಲವೇ? ಇಲ್ಲದಿದ್ದರೆ ನನ್ನ ಮಗಳನ್ನು ಬೇರೆ ಎಲ್ಲೋ ಕಳಿಸ್ಬೇಕಾಗುತ್ತದೆ.”
ಇನ್ನೊಬ್ಬ ಮಹಿಳೆ ಹೇಳಿದರು –
“ಶಿರಸಿಯಲ್ಲಿ ವರ್ಷಕ್ಕೊಮ್ಮೆ ಯಕ್ಷಗಾನ ಶಿಬಿರ ನಡೆಯುತ್ತೆ, ಆದರೆ ಕಲಿತು ನೆನಪಲ್ಲಿ ಉಳಿಯೋದು ಮಹಿಳೆಯರಿಗೆ ಕಷ್ಟ. ಒಂದು ರೆಗ್ಯುಲರ್ ಕ್ಲಾಸ್ ಆರಂಭಿಸಿದರೆ ತುಂಬಾ ಒಳ್ಳೆಯದು.”
ಈ ಮಾತುಗಳನ್ನು ಕೇಳಿದಾಗ, ಸುಮಾರು ಹತ್ತು ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಹೆಜ್ಜೆ ಹಾಕುತ್ತಿದ್ದ ಹಾಗೂ ಯಕ್ಷಗಾನ ಕ್ಷೇತ್ರಕ್ಕೆ ಏನಾದರೂ ಪ್ರತಿಯಾಗಿ ಕೊಡುವ ಆಸೆಯಿದ್ದ ಶ್ರೀಮತಿ ನಿರ್ಮಲಾ ಹೆಗಡೆ ಗೋಳಿಕೊಪ್ಪ ಅವರಿಗೆ “ಇದಕ್ಕೆ ಯಾಕಾಗಬಾರದು?” ಎಂಬ ಆಲೋಚನೆ ಮೂಡಿತು.
ಆದರೆ ಅದಕ್ಕೆ ಬೇಕಾದ ಎಲ್ಲಾ ರೀತಿಯ ಸಂಪನ್ಮೂಲಗಳ ಕುರಿತು ಆಲೋಚನೆ ಮಾಡಬೇಕೆಂದು ತೀರ್ಮಾನಿಸಿದರು.
ಒಮ್ಮೆ ಯಕ್ಷಗಾನ ಪ್ರಸಂಗ ಬರೆಯುವ ಪ್ರಯತ್ನದಲ್ಲಿ ಸಹಕರಿಸುತ್ತಿದ್ದ ಶ್ರಿ ಗಜಾನನ ಭಟ್ಟ ತುಳಗೇರಿ (ಯಕ್ಷಗಾನ ಭಾಗವತರು) ಅವರನ್ನು ಕೇಳಿದರು –
“ಯಕ್ಷಗಾನ ಕ್ಷೇತ್ರಕ್ಕೆ ಕೊಡುಗೆ ನೀಡಲು ಯಾವ ದಾರಿ ಸರಿಯಾಗಿರಬಹುದು?”
ಅವರು ಉತ್ತರಿಸಿದರು –
“ಶಿರಸಿಯಲ್ಲಿ ಯಕ್ಷಗಾನ ಕ್ಲಾಸ್ ಶುರುಮಾಡು.”
ಅವರಿಗೆ ನಿರ್ಮಲಾ ಹೆಗಡೆ ಹೇಳಿದರು –
“ನಾನು ಕಲಿಸುವಷ್ಟು ಪಕ್ವವಾಗಿಲ್ಲ.”
ಆಗ ಅವರು ಉತ್ತೇಜನ ನೀಡಿ ಹೇಳಿದರು –
“ನಿನಗೂ ಕಲಿಕೆಯಾಗುತ್ತದೆ, ನಿನ್ನಂತೆ ಹಲವರಿಗೆ ಕಲಿಯುವ ಮಾರ್ಗ ದೊರೆಯುತ್ತದೆ. ನಾವೆಲ್ಲ ಜೊತೆಯಿದ್ದೇವೆ, ಸಂಪನ್ಮೂಲ ವ್ಯಕ್ತಿಗಳ ಸಹಕಾರ ಪಡೆದು ಸಂಸ್ಥೆ ಪ್ರಾರಂಭ ಮಾಡೋಣ.”
ಈ ಮಾತುಗಳು ನಿರ್ಮಲಾ ಹೆಗಡೆ ಅವರಿಗೆ ಪ್ರೇರಣೆಯಾಗಿ, ಜೂನ್ 25, 2017 ರಂದು **“ಯಕ್ಷಗೆಜ್ಜೆ” ಸಂಸ್ಥೆ ಹುಟ್ಟಿ ಬಂತು.
ಹೀಗೆ ಈ ಕೇಂದ್ರದ ಹುಟ್ಟಿನ ಕಥೆಯನ್ನು ಹಂಚಿಕೊಂಡವರು – ಯಕ್ಷಗೆಜ್ಜೆ ಸಂಸ್ಥೆಯ ರೂವಾರಿ ಶ್ರೀಮತಿ ನಿರ್ಮಲಾ ಮಂಜುನಾಥ ಹೆಗಡೆ ಗೋಳಿಕೊಪ್ಪ.

ಯಕ್ಷಗೆಜ್ಜೆ (ರಿ) — ಕಾರ್ಯಕ್ರಮಗಳು, ಸಾಧನೆಗಳು ಮತ್ತು ಸಂಪರ್ಕ

ಉದ್ಘಾಟನೆ ಮತ್ತು ಮುಖ್ಯ ಅತಿಥಿಗಳು

ವಿದ್ವಾನ್ ಶ್ರಿ ಸುಬ್ರಾಯ ಭಟ್ಟ ಗಡಿಗೆಹೊಳೆ, ಶ್ರಿ ಕೆ.ವಿ. ಭಟ್ಟ (ಶಿರಸಿ), ಶ್ರಿ ಸುಬ್ರಾಯ ಹೆಗಡೆ ಕೆರೆಕೊಪ್ಪ, ಶ್ರಿ ಗಜಾನನ ಭಟ್ಟ ತುಳಗೇರಿ, ಮತ್ತು ಶ್ರಿ ಸುರೇಶ್ ಹಕ್ಕಿಮನೆ (ಯಕ್ಷಗೆಜ್ಜೆ ಎಂಬ ಹೆಸರನ್ನು ಸೂಚಿಸಿದವರು) ಇವರ ಸಾನ್ನಿಧ್ಯದಲ್ಲಿ ಯಕ್ಷಗೆಜ್ಜೆ ಸಂಸ್ಥೆಯ ಉದ್ಘಾಟನೆ ನೆರವೇರಿತು. ಅದೇ ಸಂದರ್ಭದಲ್ಲಿ ಶ್ರಿ ಎಂ.ಕೆ. ಹೆಗಡೆ ಗೋಳಿಕೊಪ್ಪ ಹಾಗೂ ಶ್ರೀಮತಿ ನಿರ್ಮಲಾ ಹೆಗಡೆ ಗೋಳಿಕೊಪ್ಪ ಉಪಸ್ಥಿತರಿದ್ದರು. ಮೊದಲ ಆರು ತಿಂಗಳುಗಳ ಕಾಲ ಶ್ರಿ ನರೇಂದ್ರ ಅತ್ತಿತಿಮುರುಡು ಅವರು ತರಬೇತಿ ನೀಡಿ ಮಹತ್ವದ ಸಹಕಾರ ನೀಡಿದರು.
ವಿದ್ವಾನ್ ಸುಬ್ರಾಯ ಭಟ್ಟ ಗಡಿಗೆಹೊಳೆ , ಗಣಪತಿ ಭಾಗವತ ಕವಾಳೆ ದಂಪತಿಗಳನ್ನು ಸನ್ಮಾನಿಸಲಾಯಿತು . (ಯಕ್ಷಗಾನ ಸಭಾಲಕ್ಷಣದ ಎಲ್ಲಾ ಲಕ್ಷಣ ನೃತ್ಯಗಳು ವಾರ್ಷಿಕೋತ್ಸವಗಳಲ್ಲಿಯೂ ನಿರಂತರವಾಗಿ ಪ್ರದರ್ಶಿಸಲಾಗುತ್ತವೆ.)
ಯಕ್ಷಗೆಜ್ಜೆ (ರಿ) ಸಂಸ್ಥೆ 7 ಜನ ಸದಸ್ಯರ ನೇಮಕಾತಿಯ ಮೂಲಕ ಅಧಿಕೃತವಾಗಿ ರಿಜಿಸ್ಟರ್‌ಗೊಂಡಿತು. ಸಂಸ್ಥೆಯ ಸದಸ್ಯರುಗಳು — ಶ್ರೀಮತಿ ನಿರ್ಮಲಾ ಹೆಗಡೆ, ಶ್ರೀ ಎಂ.ಕೆ. ಹೆಗಡೆ, ಶ್ರೀಮತಿ ಲತಾ ಗಿರಿಧರ, ಶ್ರೀಮತಿ ಜ್ಯೋತಿ ಭಟ್ಟ, ಶ್ರೀಮತಿ ಅನ್ನಪೂರ್ಣ ಭಟ್ಟ, ಶ್ರೀಮತಿ ಅಂಬಿಕಾ ಹೆಗಡೆ, ಮತ್ತು ಶ್ರೀ ವಿಘ್ನೇಶ್ವರ ಹೆಗಡೆ.

ಪ್ರದರ್ಶನಗಳು ಜೊತೆಗೆ ಯಕ್ಷಗೆಜ್ಜೆ (ರಿ) — ಶಿರಸಿ, ಗುಂದ, ಅಂಕೋಲ , ಬಿಣಗಾ, ಕಾರವಾರ ಮುಂತಾದ ಹಲವಾರು ಪ್ರದೇಶಗಳಲ್ಲಿ ಮಹಿಳಾ ಮತ್ತು ಮಕ್ಕಳ ಯಕ್ಷಗಾನ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತಿವೆ.

ವಾರ್ಷಿಕೋತ್ಸವ ಮತ್ತು ಸನ್ಮಾನಗಳು

ಎರಡನೇ ವಾರ್ಷಿಕೋತ್ಸವದಲ್ಲಿ ಸಂಯೋಜಕರಾದ ಗಜಾನನ್ ಭಟ್ ತುಳಗೇರಿ ಮತ್ತು ಶ್ರೀಮತಿ ಮಯೂರಿ ಉಪಾಧ್ಯಾಯ (ಬೆಂಗಳೂರು) ಅವರಿಗೆ ಸನ್ಮಾನ ನೀಡಲಾಯಿತು.

ಅತಿಥಿಗಳಾಗಿ ಭಾಗವಹಿಸಿದವರು: ಡಾ. ವಿಜಯನಳಿನಿ ರಮೇಶ್, ಶ್ರೀ ಎಂ.ಎನ್. ಹೆಗಡೆ ಹಳವಳ್ಳಿ.

ಆ ವರ್ಷದಲ್ಲಿ ತುಳಸಿ ವಿವಾಹ ಮತ್ತು ರಾಮಾಯಣ ನೃತ್ಯರೂಪಕ (ರಚನೆ: ನಿರ್ಮಲಾ ಹೆಗಡೆ) ಪ್ರದರ್ಶಿಸಲಾಯಿತು.

ಅಭಿವೃದ್ದಿ, ಅಕಾಡೆಮಿ ಮತ್ತು ಯೋಜನೆಗಳು

ಪ್ರಮುಖ ಪ್ರದರ್ಶನಗಳು ಮತ್ತು ಸ್ಪರ್ಧೆಗಳು

ಶಿಬಿರಗಳು, ತರಬೇತಿ ಮತ್ತು ತರಗತಿಗಳು

ಪುಸ್ತಕಗಳು, ಆರಂಭಿಕ ಯೋಜನೆಗಳು ಮತ್ತು ಪ್ರಕಟಣೆಗಳು

ಮಾಧ್ಯಮ ಮತ್ತು ರೆಕಾರ್ಡ್ ಮಾಡಿದ ಕಾರ್ಯಕ್ರಮಗಳು

ಆರು-ವರ್ಷಗಳ ಸಾಧನೆ ಮತ್ತು ಸನ್ಮಾನಗಳು

ಪ್ರಸಂಗ ಮತ್ತು ಸಾಂಸ್ಕೃತಿಕ ಸಂಪರ್ಕ

ಇತ್ತೀಚಿನ ಪ್ರಮುಖ ಶಿಬಿರ (ಏಪ್ರಿಲ್ 2025)

ಧನ್ಯವಾದಗಳು ಮತ್ತು ಆಶೀರ್ವಾದ

ಸಂಸ್ಥೆಯ ನಿರಂತರ ಚಟುವಟಿಕೆಗಳಿಗೆ ಮತ್ತು ಬೆಂಬಲಕ್ಕೆ ಸಾಕಷ್ಟು ವ್ಯಕ್ತಿಗಳು, ಗ್ರಾಮೀಣ ಸಮುದಾಯ, ಕಲಾ ಪ್ರೋತ್ಸಾಹಕ ಸಂಸ್ಥೆಗಳು ವಿದ್ಯಮಾನಗಳ ಪುನರಾವೃತ್ತಿಗೆ ಸಹಕಾರವಾಗಿ ಬಂದಿದೆ — ಇದು ಯಕ್ಷಗೆಜ್ಜೆ ಸಂಸ್ಥೆಯ ಹೆಮ್ಮೆಯ ಸಂಗತಿ.

ಭಾವ, ಭಕ್ತಿ, ನಾದ ಮತ್ತು ನೃತ್ಯದ ಪಾವನ ಯಾತ್ರೆ – ಯಕ್ಷಗಾನ.